ಡಿಸೆಂಬರ್ ೧೨ - ಡಿಸೆಂಬರ್ ತಿಂಗಳಿನ ಹನ್ನೆರಡನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೬ನೇ (ಅಧಿಕ ವರ್ಷದಲ್ಲಿ ೩೪೭ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೮೦೦ - ವಾಷಿಂಗ್ಟನ್ ಡಿ.ಸಿ. ಅಮೇರಿಕಾ ದೇಶದ ರಾಜಧಾನಿಯಾಗಿ ಆಸ್ತಿತ್ವಕ್ಕೆ. ೧೮೧೨ - ನೆಪೋಲಿಯನ್ ಬೊನಪಾರ್ಟೆ ನೇತೃತ್ವದ ಫ್ರೆಂಚರಿಂದ ರಷ್ಯಾದ ಆಕ್ರಮಣ ಸೋಲಿನಲ್ಲಿ ಕೊನೆಗೊಂಡಿತು. ೧೯೦೧ - ಗುಗ್ಲಿಯೆಲ್ಮೊ ಮಾರ್ಕೊನಿಯ ಆವಿಶ್ಕಾರದಿಂದ ಅಟ್ಲಾಂಟಿಕ್ ಮಹಾಸಾಗರದ ಎರಡು ಕಡೆಗಳ ಮಧ್ಯದಲ್ಲಿ ಮೊದಲ ರೇಡಿಯೊ ಸಂಜ್ಞೆ ಕಳುಹಿಸಲಾಯಿತು. ೧೯೧೧ - ನವ ದೆಹಲಿ ಭಾರತದ ರಾಜಧಾನಿಯಾಯಿತು. ೧೯೬೪ - ಜೊಮೊ ಕೆನ್ಯಾಟ್ಟ ಕೀನ್ಯಾ ಗಣರಾಜ್ಯದ ಮೊದಲ ರಾಷ್ಟ್ರಪತಿಯಾದನು. ೧೯೭೧ - ಭಾರತದಲ್ಲಿ ಹಿಂದೆ ರಾಜರಾಗಿದ್ದವರಿಗೆ ನೀಡುತ್ತಿದ್ದ ಎಲ್ಲ ಸೌಲಭ್ಯ ಮತ್ತು ರಾಜಧನ ರದ್ದು. ೧೯೭೯ - ರೊಡೇಸಿಯ ತನ್ನ ಹೆಸರನ್ನು ಜಿಂಬಾಬ್ವೆ ಎಂದು ಬದಲಾಯಿಸಿಕೊಂಡಿತು. == ಜನನ == ೧೭೨೧ - ಬಾಲಾಜಿ ಬಾಜಿರಾವ್(ನಾನಾಸಾಹೇಬ್ ಪೇಶ್ವೆ, ಮರಾಠಾ ರಾಜ್, ಮೂರನೇಯ ಪೇಶ್ವೆ. ೧೭೩೧ - ಇರ‍್ಯಾಜ಼್‌ಮಸ್ ಡಾರ್ವಿನ್, ಇಂಗ್ಲೆಂಡ್‌ನ ಭೌತವಿಜ್ಞಾನಿ ೧೯೦೦ - ಎಸ್.ಸಿ.ನಂದೀಮಠ, ಶಿಕ್ಷಕರು ಮತ್ತು ಗ್ರಂಥ ಸಂಪಾದಕರು ೧೯೦೫ - ಮುಲ್ಕರಾಜ್ ಆನಂದ್, ಭಾರತೀಯ ಕಾದಂಬರಿಕಾರ. ೧೯೪೦ - ಶರದ್ ಪವಾರ್, ಭಾರತೀಯ ರಾಜಕಾರಣಿ. ೧೯೪೯ - ರಜನೀಕಾಂತ್, ಭಾರತದ ಚಲನಚಿತ್ರ ನಟ. ೧೯೫೯ - ಕೃಷ್ಣಮಾಚಾರಿ ಶ್ರೀಕಾಂತ್, ಭಾರತೀಯ ಕ್ರಿಕೆಟಿಗ. ೧೯೮೧ - ಯುವರಾಜ್ ಸಿಂಗ್, ಭಾರತೀಯ ಕ್ರಿಕೆಟಿಗ. == ಮರಣ == ೮೮೪- ಎರಡನೇ ಕಾರ್ಲೊಮಾನ್, ಫ್ರಾಂಕರ ರಾಜ. ೧೯೬೪-ಮೈಥಿಲಿ ಶರಣ್ ಗುಪ್ತಾ, ಖ್ಯಾತ ಹಿಂದಿ ಲೇಖಕಿ. ೨೦೦೦- [ಜೆ.ಎಚ್.ಪಟೇಲ್]], ಭಾರತೀಯ ರಾಜಕಾರಣಿ. ೨೦೧೦-ಬಿ.ಎಸ್.ರಂಗಾ, ಕನ್ನಡ ಚಲನ ಚಿತ್ರರಂಗ ಅತಿ ಹಿರಿಯ, ನಿರ್ದೇಶಕ, ಹಾಗೂ ಛಾಯಾಗ್ರಾಹಕಕರು, ತಮ್ಮ ಸ್ವ-ಗೃಹದಲ್ಲಿ ರವಿವಾರದ ಬೆಳಿಗ್ಯೆ, ೮-೪೫ ಕ್ಕೆ ಮನೆಯಲ್ಲೇ ಕುಸಿದು ಬಿದ್ದು ನಿಧನರಾದರು. == ದಿನಾಚರಣೆಗಳು == ಕೀನ್ಯಾ - ಸ್ವಾತಂತ್ರ್ಯ ದಿನಾಚರಣೆ